ಕೊರಗ ಸಮುದಾಯದವರಿಗೆ ದಾಖಲೆ ಒದಗಿಸಲು ವಿಶೇಷ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಪ್ರಧಾನ ಮಂತ್ರಿ ಜನ್‍ ಮನ್ ಆದಿವಾಸಿ ಮಹಾ ಅಭಿಯಾನ (PM- JANMAN) ಯೋಜನೆಯಡಿ ವಿಶೇಷವಾಗಿ ದುರ್ಬಲ ಬುಡಕಟ್ಟು ಕೊರಗ ಸಮುದಾಯದವರನ್ನು ಸಾಮಾಜಿಕ- ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ (PVTG) ಅಭಿವೃದ್ಧಿ ಮಿಷನ್ ಅನ್ನು ಪ್ರಾರಂಭಿಸಿ ಸಮುದಾಯದವರಿಗೆ  ಮೂಲಭೂತ ಸೌಲಭ್ಯಗಳನ್ನು ನೀಡಲು  ಸರಕಾರಿ ದಾಖಲೆಗಳಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಯುಷ್ಮಾನ್ ಕಾರ್ಡ್, ಗೃಹಜ್ಯೋತಿ, ಕಿಸಾನ್ ಕಾರ್ಡ್ ಯೋಜನೆ ಹಾಗೂ ಇನ್ನಿತರ ಅವಶ್ಯಕ ದಾಖಲೆಗಳನ್ನು ಒದಗಿಸಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

Also Read  ನ.01ರಂದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ

Nk

ಶಿಬಿರವು ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟೆಗೆ, ಮಂಗಳೂರು ತಾಲೂಕು, ಕುದ್ಮುಲ್ ರಂಗರಾವ್ ಪುರಭವನ ಮಿನಿಹಾಲ್ ನಲ್ಲಿ ನಡೆಯಲಿದೆ. ಆಗಸ್ಟ್ 31 ರಂದು ಬೆಳಿಗ್ಗೆ 10.30 ಗಂಟೆಗೆ, ಮೂಡಬಿದ್ರೆ ತಾಲೂಕು ಕಚೇರಿ ಸಭಾಂಗಣದಲ್ಲಿ, ಸೆಪ್ಟೆಂಬರ್ 2 ರಂದು ಬೆಳಿಗ್ಗೆ 10.30 ಗಂಟೆಗೆ, ಮುಲ್ಕಿ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆಯಲಿದೆ. ಕೊರಗ ಸಮುದಾಯದ ಜನಾಂಗದವರೆಲ್ಲರೂ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top