ಐವನ್‌ ಡಿಸೋಜರವರ ದೇಶದ್ರೋಹ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 29. ಎಂಎಲ್ ಸಿ ಐವನ್‌ ಡಿ ಸೋಜರವರ ದೇಶದ್ರೋಹ ಹೇಳಿಕೆ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಎಫ್ ಐ ಆರ್ ದಾಖಲಿಸಲಿಸದಿರುವುದು ಹಾಗೂ ರಾಜ್ಯಪಾಲರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

ಇದಕ್ಕೂ ಮೊದಲು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ನಾಯಕ ವಿಕಾಸ್ ಪುತ್ತೂರು ಅವರು , ಸಿಎಂ.ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿದು ಹಿಂಭಾಗಿಲ ಮೂಲಕ ವಿಧಾನಪರಿಪತ್ ಪ್ರವೇಶಿಸಿರುವ ಐವಾನ್ ಡಿಸೋಜಾರಿಗೆ ಜನಪ್ರತಿನಿಧಿಯಾಗಿರುವ ಯೋಗ್ಯತೆ ಇಲ್ಲ ಜನವಿರೋಧಿಯಾಗಿರುವ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ, ಯೋಗ್ಯತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.  ಬಿಜೆಪಿ ಸಂವಿಧಾನ,ನೆಲದ ಕಾನೂನಿಗೆ ಗೌರವ ಕೊಡುವಂತಹ ಪಕ್ಷವಾಗಿದೆ. ಸಿದ್ದರಾಮಯ್ಯ ಅವರು ರಾಜ್ಯ ಕಂಡ ಭ್ರಷ್ಟ ಮುಖ್ಯಂಮತ್ರೊಯಾಗಿದ್ದಾರಲ್ಲದೆ ದ‌ಲಿತರ ಹೆಸರಿನಲ್ಲಿ ರಾಜಕಾರಣ ಮಾಡಿ ದಲಿತರಿಗೆ ಮೋಸ ಮಾಡುವ ದಲಿತವಿರೋಧಿ ಸರಕಾರವಾಗಿದೆ ಎಂದು ಟೀಕಿಸಿದರು ಎನ್ನಲಾಗಿದೆ.

Also Read  ಮಂಗಳೂರು: ಜುಗಾರಿ ಆಡುತ್ತಿದ್ದ ಮೂವರ ಬಂಧನ ➤ 75 ಸಾವಿರ ಮೌಲ್ಯದ ಸ್ವತ್ತು ವಶ

                                                                         

 

 

error: Content is protected !!
Scroll to Top