ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಪರೀಕ್ಷಾ ಕಿಟ್‌ಗಳ ಅಳವಡಿಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ಅಸುರಕ್ಷಿತರ ಆಹಾರಗಳ ಮೇಲೆ ಸಮರ ಸಾರಿರುವ ಆಹಾರ ಮತ್ತು ಗುಣಮಟ್ಟ ಸುರಕ್ಷತಾ ಇಲಾಖೆ, ಜನರಿಗೆ ತಾವು ತಿನ್ನುವ ಆಹಾರವನ್ನು ತಾವೇ ಪರೀಕ್ಷಿಸುವ ಅವಕಾಶವನ್ನು ನೀಡಲು ಸಜ್ಜಾಗಿದೆ.

ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಫುಡ್ ಕೋರ್ಟ್ ಮತ್ತು ಮಾಲ್‌ ಗಳ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪರೀಕ್ಷಾ ಕಿಟ್‌ಗಳು ಲಭ್ಯವಿರಲಿದ್ದು, ಜನರೇ ತಾವು ತಿನ್ನುವ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಹೊಟೆಲ್ ರೆಸ್ಟೊರೆಂಟ್ ಫುಡ್‌ ಪಾರ್ಕ್‌ ನಂತಹ ಸಾರ್ವಜನಿಕ ಸ್ಥಳಗಳಲ್ಲಿ 3400 ಪರೀಕ್ಷಾ ಕಿಟ್‌ ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪ್ರತಿ ತಿಂಗಳು ವಿವಿಧ ಮಾರಾಟ ಕೇಂದ್ರಗಳಿಂದ ನಿರ್ದಿಷ್ಟ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಆಯ್ಕೆ ಮಾಡುತ್ತದೆ. ಇದರಂತೆ ಆಗಸ್ಟ್ ನಲ್ಲಿ ಬೇಕರಿ ತಿನಿಸುಗಳನ್ನು ವಿಶ್ಲೇಷಿಸಲು 211 ಪನ್ನೀರ್‌, 246 ಕೇಕ್, 67 ಕೋವಾದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Also Read  ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

 

error: Content is protected !!
Scroll to Top