(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 29. ವ್ಯಕ್ತಿಯೋರ್ವ ವಾಹನವನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಣಿಯೂರು ನಿವಾಸಿ ಸಿದ್ದಿಕ್(43ವ) ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ. 27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ ಎಂಬವರು ಅಲ್ಲಿ ಪೋನ್ ನಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆ ಎದುರಿನಿಂದ ಬೇರೆ ವಾಹನ ಬಂದುದರಿಂದ ಸಿದ್ದೀಕ್ ಅವರು ತಮ್ಮ ವಾಹನವನ್ನು ಆರೋಪಿಯ ಸಮೀಪದಿಂದ ಚಲಾಯಿಸಿದ್ದಾರೆ. ಈ ವೇಳೆ ಶರತ್ ಅವಾಚ್ಯವಾಗಿ ಬೈದಿದ್ದು ನಂತರ ಸಿದ್ದೀಕ್ ಅವರು ವಾಹನ ಚಲಾಯಿಸುತ್ತಾ ಮುಂದೆ ಹೋದಾಗ ಅವರ ಹಿಂದಿನಿಂದ ಶರತ್ ಮೋಟಾರು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸಿದ್ದೀಕ್ ಅವರನ್ನು ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸಿದ್ದೀಕ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2024ರಂತೆ ಕಲಂ 126(2), 115(2) , 352,351(2) BNS 2023 ರಡಿ ಪ್ರಕರಣ ದಾಖಲಾಗಿದೆ.