(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ಆಲ್ ಇಂಡಿಯಾ KMCC ಸುಳ್ಯ ವಲಯದ ವಿಶೇಷ ಸಭೆಯು ಆರಂತೋಡು ತೆಕ್ಕಿಲ್ ಸಭಾಂಗಣದಲ್ಲಿ ಬುಧವಾರದಂದು ಖಲಂದರ್ ಎಲಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೆಪ್ಟೆಂಬರ್ 5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಲಂದರ್ ಎಲಿಮಲೆಯವರು ಸದಸ್ಯತ್ವ ಅಭಿಯಾನ, ಅಂಬುಲನ್ಸ್ ಸೇವೆ, ಸಾಮೂಹಿಕ ವಿವಾಹ ಪಾಲಿಯೇಟಿವ್ ಕೇರ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಆಲ್ ಇಂಡಿಯಾ KMCC ವತಿಯಿಂದ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧೆಡೆ ಅಂಬುಲನ್ಸ್ ಸೇವೆ ಇದ್ದು ಸುಳ್ಯದಲ್ಲೂ ಸೇವೆ ಆರಂಭಿಸಿದೆ ಎಂದರು. ಅಲ್ ಇಂಡಿಯಾ KMCC ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ KMCC ನೀಡುತ್ತಿರುವ ಸೇವೆಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು. KPCC ಪ್ರದಾನ ಕಾರ್ಯದರ್ಶಿ ಟಿ.ಎಂ.ಶಹೀದ್ ಮಾತನಾಡಿ, ವಯನಾಡ್ ದುರಂತ ಸಂದರ್ಭದಲ್ಲಿ KMCC ನೀಡಿದ ಸೇವೆಗಳ ಕುರಿತು ಪ್ರಶಂಸಿಸಿದರು. ದ.ಕ ಜಿಲ್ಲಾ ಆಲ್ ಇಂಡಿಯಾ KMCC ಕೋಶಾಧಿಕಾರಿ ಇಬ್ರಾಹಿಂ ಹಾಜಿ ಖತ್ತರ್, ಸುಳ್ಯ KMCC ಮೆಡಿಕಲ್ ಇನ್-ಚಾರ್ಜ್ ಫೈಝಲ್ ಜಟ್ಟಿಪಳ್ಳ, ಶಾಹಿದ್ ಪಾರೆ, ಸಂಶುದ್ದೀನ್ ಅರಂತೋಡು, ಸಿರಾಜ್ ನೆಟ್ಟಾರು, ತಾಜುದ್ದೀನ್ ಆರಂತೋಡು, ಹನೀಫ್ ಮುಕ್ವೆ, ಹನೀಫ್ ನಂದಿನಿ, ಆಶಿಕ್ ಆರಂತೋಡು, ಶಿಹಾಬ್ ಜಟ್ಟಿಪಳ್ಳ ಸಭೆಯಲ್ಲಿ ಬಾಗವಹಿಸಿದ್ದರು.
ಸುಳ್ಯ ಆಲ್ ಇಂಡಿಯಾ KMCC ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು.