(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು ಅವಳೇ ನನ್ನ ಹೆಂಡ್ತಿ, ಅಣ್ಣತಂಗಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು. ವಿಷ್ಣುವರ್ಧನ್ ಅಭಿನಯದ ತುಂಬಿದ ಮನೆ ಮತ್ತು ಎಲ್ಲರಂಥಲ್ಲ ನನ್ನ ಗಂಡ, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಶಶಿಕುಮಾರ್ ಅಭಿನಯದ ಮುದ್ದಿನ ಮಾವ, ಶಿವರಾಜ್ ಕುಮಾರ್ ಮತ್ತು ರಾಧಿಕಾ ಅಭಿನಯದ ಅಣ್ಣ ತಂಗಿ, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿನಯದ ಲವ ಕುಶ ಚಿತ್ರಗಳನ್ನು ನಿರ್ಮಿಸಿದರು. ಲವ ಕುಶ ಸಿನೆಮಾ ನಿರ್ಮಾಣದ ಬಳಿಕ ದೂರ ಉಳಿದಿದ್ದ ಇವರಿಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.