ಗಣೇಶ ಹಬ್ಬಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಗೌರಿ-ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹಬ್ಬಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ಆರಂಭಿಸಿದೆ. ಇದರಂತೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯುತ್ತಿದೆ. ಆದರೆ, ವಶಕ್ಕೆ ಪಡೆದ ಈ ಪಿಒಪಿ ಗಣೇಶ ಮೂರ್ತಿಗಳು ಯಾವ ರೀತಿ ವಿಲೇವಾರಿಯಾಗುತ್ತಿದೆ ಎಂಬುದರ ಕುರಿತ ಪ್ರಶ್ನೆ ಹಲವರಲ್ಲಿ ಕಾಡತೊಡಗಿದೆ.

ಇಲ್ಲಿಯವರೆಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಜಿಲ್ಲಾಡಳಿತಗಳು ಮತ್ತು ಮಹಾನಗರ ಪಾಲಿಕೆಗಳು ರಾಜ್ಯದಲ್ಲಿ ಸುಮಾರು 5,000 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿವೆ, ಈ ಪೈಕಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಮೂರ್ತಿಗಳ ಸರಬರಾಜು ಮಾಡುವ ರಾಮನಗರದಿಂದಲೇ ಅತೀ ಹೆಚ್ಚು ಮೂರ್ತಿಗಳ ವಶಕ್ಕೆ ಪಡೆದಿದೆ ಎಂದು ವರದಿ ತಿಳಿದುಬಂದಿದೆ.

Also Read  ಸ್ಕಾಲರ್ಶಿಪ್ ಅವ್ಯವಸ್ಥೆ ವಿರುದ್ಧ "ಸ್ಕಾಲರ್ಶಿಪ್ ಕೊಡಿ" ಆಂದೋಲನ ➤ ಕ್ಯಾಂಪಸ್ ಫ್ರಂಟ್ ನಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ

 

error: Content is protected !!
Scroll to Top