23ನೇ ವಯಸ್ಸಿಗೆ IFS ಅಧಿಕಾರಿಯಾದ ತಮಾಲಿ ಸಹಾ..!

(ನ್ಯೂಸ್ ಕಡಬ) newskadaba.com ಪಶ್ಷಿಮ ಬಂಗಾಳ, . 28. ಪರಿಶ್ರಮ ಮತ್ತು ಶ್ರದ್ಧೆಯೊಂದಿದ್ದರೆ ಯಾವ ವಯಸ್ಸಿನಲ್ಲಾದರೂ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ.

Nk

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ತಮಾಲಿ ಸಹಾ ಎಂಬಾಕೆ, 23ನೇ ವಯಸ್ಸಿಗೆ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ. ತನ್ನ ಶಾಲಾ ಶಿಕ್ಷಣವನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ಮಾಡಿ ಬಳಿಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಮುಗಿಸಿದ್ದರು. ತಮಾಲಿ ಸಹಾ ಅವರು ತನ್ನ ಪದವಿ ಶಿಕ್ಷಣ ಪಡೆಯುವ ವೇಳೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರಾರಂಭಿಸಿ, 2020 ರಲ್ಲಿ ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ 94 ನೇ ರ್ಯಾಂಕ್‌ ನೊಂದಿಗೆ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದರು. ನಂತರ  ಅವರು ಐಎಫ್‌ಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳದಲ್ಲೇ ನೇಮಕಗೊಳ್ಳುತ್ತಾರೆ. ಇದರೊಂದಿಗೆ 23 ನೇ ವಯಸ್ಸಿನಲ್ಲಿ ಐಎಫ್‌ಎಸ್ ಅಧಿಕಾರಿಯಾಗುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

Also Read  ವಿಟ್ಲ: ಹಠಾತ್ತನೆ ಕುಸಿದುಬಿದ್ದು ವ್ಯಕ್ತಿ ಮೃತ್ಯು

 

error: Content is protected !!
Scroll to Top