ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತರಿಗೆ ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನವನ್ನು ಅರ್ಪಿಸಿದ ಮಮತಾ ಬ್ಯಾನರ್ಜಿ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 28.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತರಿಗೆ ಪಕ್ಷದ ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನವನ್ನು ಅರ್ಪಿಸಿದ್ದಾರೆ. ಟಿಎಂಸಿಪಿ ಎಂದು ಜನಪ್ರಿಯವಾಗಿರುವ ತೃಣಮೂಲ ಛತ್ರ ಪರಿಷತ್ತು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ.

“ಕ್ರೂರವಾಗಿ ಚಿತ್ರಹಿಂಸೆಗೆ ಒಳಗಾದ ಸಹೋದರಿಯ ಕುಟುಂಬಕ್ಕೆ ನಮ್ಮ ಸಂತಾಪಗಳು ಮತ್ತು ನಾವು ಅವಳಿಗೆ ತ್ವರಿತ ನ್ಯಾಯವನ್ನು ಕೋರುತ್ತಿದ್ದೇವೆ ಮತ್ತು ಭಾರತದಾದ್ಯಂತ ಇಂತಹ ಅಮಾನವೀಯ ಕೃತ್ಯಗಳಿಗೆ ಒಳಗಾದ ಎಲ್ಲಾ ವಯಸ್ಸಿನ ಮಹಿಳೆಯರ ವಿಚಾರಕ್ಕೂ ವಿಷಾದವಿದೆ ದುಃಖವಿದೆ.” ಎಂದು ಅವರು ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

Also Read  15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳ ನೋಂದಣಿ ರದ್ದು! ➤ ಕೇಂದ್ರ ಸರ್ಕಾರ

 

 

error: Content is protected !!
Scroll to Top