ಕರ್ನಾಟಕ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ರಾಜ್ಯದ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್​​ 30ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 

ಹುದ್ದೆಯ ಮಾಹಿತಿ
ಲೀಗಲ್‌ ಟೈಪಿಸ್ಟ್‌-1
ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)-1,

ವಿದ್ಯಾರ್ಹತೆ: ಲೀಗಲ್‌ ಟೈಪಿಸ್ಟ್‌- ಎಲ್‌ಎಲ್‌ಬಿ, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- CSE/ISನಲ್ಲಿ ಬಿಇ, ಪಿಜಿ ಡಿಪ್ಲೊಮಾ ಮಾಡಿರಬೇಕು.

ವೇತನ: ಲೀಗಲ್‌ ಟೈಪಿಸ್ಟ್‌- ಮಾಸಿಕ ₹ 18,700, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- ಮಾಸಿಕ ₹ 50,000,

ಲಿಖಿತ ಪರೀಕ್ಷೆ ಬರೆಯುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜೊತೆಗೆ ಸಂದರ್ಶನ ಕೂಡಾ ಇರಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಿದೆ. ಅದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್ ​kandaya.karnataka.gov.in ಗೆ ಭೇಟಿ ನೀಡಿ. ನಂತರ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ. ನಂತರ ಸರಿಯಾದ ವಿಳಾಸಕ್ಕೆ ಅರ್ಜಿ ನಮೂನೆ ಕಳುಹಿಸಿ

Also Read  ಮಂಗಳೂರು: ಕೆಸಿಸಿ ಟ್ರಸ್ಟ್‌ನಿಂದ ವಾಟ್ಸ್‌ಆ್ಯಪ್ ಮೂಲಕ ಟೆಲಿ ಮೆಡಿಸಿನ್ ಸೇವೆ

ವಿಳಾಸ: ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001.

 

error: Content is protected !!
Scroll to Top