ತೋಳಗಳ ದಾಳಿಗೆ ಆರು ಮಕ್ಕಳು ಸೇರಿದಂತೆ ಏಳು ಜನ ಸಾವು..!

(ನ್ಯೂಸ್ ಕಡಬ) newskadaba.c0m ಲಖನೌ, ಆ. 27.  ಉತ್ತರ ಪ್ರದೇಶದ ಇಂಡೋ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ ನ ಮಹಾಸಿ ಬ್ಲಾಕ್‌ನ 30 ಗ್ರಾಮಗಳಲ್ಲಿ ತೋಳಗಳ ಗುಂಪು ದಾಳಿ ನಡೆಸಿದ್ದು, ಘಟನೆಯಲ್ಲಿ ಆರು ಮಕ್ಕಳು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ ಮತ್ತು 26 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅರಣ್ಯ ಇಲಾಖೆಯು ತೋಳಗಳನ್ನು ಸೆರೆ ಹಿಡಿಯಲು ಒಂಬತ್ತು ಜನರ ತಂಡವನ್ನು ನಿಯೋಜಿಸಿದೆ. ತೋಳಗಳ ಗ್ರಾಮಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದು, ಕಳೆದ ಒಂದು ತಿಂಗಳಿಂದ ಈ ಪ್ರದೇಶದ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿವೆ. ಗ್ರಾಮಸ್ಥರು ತೋಳಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾತ್ರಿ ಪಾಳಿಗಳಲ್ಲಿ ಕಾಯುತ್ತಿದ್ದಾರೆ. ಅರಣ್ಯಾಧಿಕಾರಿಗಳು ಇಲ್ಲಿಯವರೆಗೆ ಮೂರು ತೋಳಗಳನ್ನು ಹಿಡಿದು ಲಖನೌ ಮೃಗಾಲಯಕ್ಕೆ ಕಳುಹಿಸಿದ್ದಾರೆ. ಅರಣ್ಯ ಇಲಾಖೆಯು ಥರ್ಮಲ್ ಡ್ರೋನ್ ಸೇರಿದಂತೆ ವಿವಿಧ ತಂತ್ರಜ್ಞಾನಗಳೊಂದಿಗೆ ತೋಳಗಳನ್ನು ಟ್ರ್ಯಾಕ್ ಮಾಡುತ್ತಿದೆ ಎಂದು ವರದಿಯಾಗಿದೆ.

Also Read  ರೈಲು ಢಿಕ್ಕಿ- ಅಪರಿಚಿತ ವ್ಯಕ್ತಿ ಮೃತ್ಯು

 

 

error: Content is protected !!
Scroll to Top