ಬಾಡಿಗೆ ಪಾವತಿಸದ 2 ಅಂಚೆ ಕಚೇರಿಗಳಿಗೆ ಬೀಗ ಹಾಕಿದ ಬಿಬಿಎಂಪಿ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.  ಲಕ್ಷಾಂತರ ರೂ. ಕಟ್ಟಡ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ನಗರದ 2 ಅಂಚೆ ಕಚೇರಿಗಳಿಗೆ ಬಿಬಿಎಂಪಿ ಬೀಗ ಹಾಕಿದೆ. ಸೇಂಟ್ ಜಾನ್ಸ್ ರಸ್ತೆಯಲ್ಲಿ ಬಿಬಿಎಂಪಿ ಸ್ವತ್ತಿನ 1,665 ಚದರಡಿ ವಿಸ್ತೀರ್ಣದ ಮಳಿಗೆ ಯಲ್ಲಿರುವ ಅಂಚೆ ಕಚೇರಿ 2014ರ ಏಪ್ರಿಲ್‌ನಿಂದಲೂ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದೆ. ಪರಿಷ್ಕೃತ ಬಾಡಿಗೆ ಪಾವತಿಸಲು ಹಲವು ಬಾರಿ ನೋಟಿಸ್‌ ನೀಡಿದ್ದರೂ ಸ್ಪಂದಿಸಿರಲಿಲ್ಲ. ಒಟ್ಟು 88.91 ಲಕ್ಷ ರೂ.ಬಾಡಿಗೆ ಬಾಕಿ ಇದೆ. ಹೀಗಾಗಿ, ಪೂರ್ವ ವಲಯ ಆಯುಕ್ತರ ಆದೇಶದಂತೆ ಪಾಲಿಕೆ ಸಿಬ್ಬಂದಿ ಮಳಿಗೆಗೆ ಬೀಗ ಹಾಕಿದ್ದಾರೆ ಎಂದು ವರದಿಯಾಗಿದೆ.

ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 214 ಚದರಡಿ ಯಲ್ಲಿರುವ ಅಂಚೆ ಕಚೇರಿಯು 2016ರ ಜನವರಿಯಿಂದ ಪರಿಷ್ಕೃತ ಬಾಡಿಗೆಯನ್ನು ಪಾವತಿ ಸಿರಲಿಲ್ಲ. 10.80 ಲಕ್ಷ ರೂ. ಬಾಕಿ ಇದೆ. ಹೀಗಾಗಿ, ಈ ಮಳಿಗೆಗೂ ಪಾಲಿಕೆ ಸಿಬ್ಬಂದಿ ಬೀಗ ಹಾಕಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 

error: Content is protected !!

Join the Group

Join WhatsApp Group