ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್  ಸವಾರನಿಗೆ ಏಟು ನೀಡಿ ಬುದ್ಧಿ ಕಲಿಸಿದ ಯೋಧ   

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27. ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್ ಮಾಡಿದ ಬೈಕ್ ಸವಾರನೋರ್ವನಿಗೆ ಗೆ ಭಾರತೀಯ ವಾಯು ಸೇನೆಯ ಯೋಧ ಏಟು ನೀಡಿ ಬುದ್ಧಿ ಕಲಿಸಿದ ಘಟನೆ ನಗರದ ಈಜೀಪುರ ಸಿಗ್ನಲ್ ಬಳಿ ನಡೆದಿದೆ.

ಒನ್ ವೇ ನಲ್ಲಿ ಬಂದ ಬೈಕ್ ಸವಾರ, ಕಾರಿಗೆ ಅಡ್ಡ ಬಂದಿದ್ದಾನೆ. ಬಳಿಕ ತನ್ನ ಬೈಕ್ ಅನ್ನು ನಿಲ್ಲಿಸಿ ಕಾರನ್ನು ಸೈಡ್‌ ಗೆ ಹೋಗುವಂತೆ ಸೂಚಿಸಿದ್ದಾನೆ. ಕಾರು ಚಾಲಕ ಪಕ್ಕಕ್ಕೆ ಹೋಗದೇ ಅಲ್ಲಿಯೇ ನಿಂತಿರುತ್ತಾನೆ. ಈ ವೇಳೆ ಎದುರು ರಸ್ತೆಯಿಂದ ಏರ್ ಫೋರ್ಸ್ ಟ್ರಕ್ ಬಂದಿದ್ದು, ವಾಹನ ಇಳಿದು ಬಂದ ಭಾರತೀಯ ವಾಯುಸೇನೆಯ ಯೋಧ, ನೀವು ಬಂದಿದ್ದು, ತಪ್ಪು, ಹಿಂದಕ್ಕೆ ಹೋಗಿ ಎಂದು ಬೈಕ್ ಸವಾರನಿಗೆ ಬುದ್ಧಿ ಹೇಳಿದ್ದಾರೆ. ಆದರೆ ಬೈಕ್ ಸವಾರ ಅವರ ಮಾತನ್ನು ಲೆಕ್ಕಿಸದೇ ಅವರಿಗೆ ಎದುರು ಮಾತನಾಡಿದ್ದಾನೆ. ಈ ವೇಳೆ ಕೋಪಗೊಂಡ ಯೋಧ ಆತನ ತಲೆಗೆ ಏಟು ಕೊಟ್ಟಿದ್ದಾರೆ ಎನ್ನಲಾಗಿದೆ.

Also Read  ವಾರಾಂತ್ಯ ಕರ್ಫ್ಯೂ- ಪ್ರಯಾಣಕ್ಕೆ ಬೇಕು ನೆಗೆಟಿವ್ ರಿಪೋರ್ಟ್..! ➤ ಕೆಎಸ್ಸಾರ್ಟಿಸಿ ಯಿಂದ ಖಡಕ್ ರೂಲ್ಸ್

 

error: Content is protected !!
Scroll to Top