(ನ್ಯೂಸ್ ಕಡಬ) newskadaba.com ನವದೆಹಲಿ, ಆ. 27. ದೇಶದಲ್ಲಿ ಸೆ. 01ರಿಂದ ಮೊಬೈಲ್ ನಂಬರ್‌ಗಳಿಗೆ ಬ್ಯಾಂಕ್ & ಇತರ ವೇದಿಕೆಗಳಿಂದ ಬರುವ OTP ವ್ಯವಸ್ಥೆ ಬಂದ್ ಆಗುವ ಸಾಧ್ಯತೆಯಿದ್ದು, ಹೀಗಾದರೆ ಸಾರ್ವಜನಿಕರು ಲಾಗ್ ಇನ್ ಮತ್ತು ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.
ಸ್ಪ್ಯಾಮ್ ಮೆಸೇಜ್ ಗಳಿಗೆ ಕಡಿವಾಣ ಹಾಕಲು ಟ್ರಾಯ್ ಹೊರಡಿಸಿದ್ದ ಆದೇಶ ಸೆ. 01ರಿಂದ ಜಾರಿಯಾಗಲಿದೆ. ಮೊಬೈಲ್ ಕಂಪೆನಿಗಳ ಜತೆ ನೊಂದಣಿ ಮಾಡಿಕೊಳ್ಳದಿದ್ದರೆ ಅಂಥಹ ಕಂಪೆನಿ ಮೆಸೇಜ್ ನಿರ್ಬಂಧಿಸಲು ಸೂಚಿಸಿತ್ತು. ಕಂಪೆನಿಗಳು ಇನ್ನೂ ಮೆಸೇಜ್ ಶೈಲಿಯನ್ನು ಮೊಬೈಲ್ ನೆಟ್‌ವರ್ಕ್ ಕಂಪೆನಿಗೆ ನೀಡಿ ನೋಂದಾಯಿಸಿಕೊಂಡಿಲ್ಲ.