ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪ – ತಮಿಳುನಾಡಿನ 8 ಮೀನುಗಾರನ್ನು ಬಂಧಿಸಿದ ಶ್ರೀಲಂಕಾ

(ನ್ಯೂಸ್ ಕಡಬ) newskadaba.com ರಾಮೇಶ್ವರಂ, . 27. ಡೆಲ್ಫ್ಟ್ ದ್ವೀಪದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಡಿ ತಮಿಳುನಾಡಿನ 8 ಮಂದಿ ಮೀನುಗಾರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ವರದಿಯಾಗಿದೆ.

ಮೀನುಗಾರರು ಧನುಷ್ಕೋಡಿ ಮತ್ತು ತಲೈಮನ್ನಾರ್ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆ ಗಡಿ ಮೀರಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಾಡದೋಣಿ ಸಹಿತ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಕುರಿತು ಹೇಳಿಕೆ ನೀಡಿರುವ ರಾಮೇಶ್ವರಂ ಮೀನುಗಾರಿಕೆ ಸಹಾಯಕ ನಿರ್ದೇಶಕ, ರಾಮೇಶ್ವರಂನಿಂದ 430 ಯಾಂತ್ರೀಕೃತ ದೋಣಿಗಳು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿದ್ದ  ವೇಳೆ ಗಡಿ ದಾಟಿದ ಆರೋಪ ಹೊರಿಸಿ ಲಂಕಾ ನೌಕಾಪಡೆಯು ಬೋಟ್ ಸಹಿತ 8 ಮೀನುಗಾರರನ್ನು ಬಂಧಿಸಿದೆ. ಕೂಡಲೇ ಕೇಂದ್ರ ಮಧ್ಯಸ್ಥಿಕೆ ವಹಿಸಿ ಮೀನುಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ.

Also Read  ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲಾವಣೆ

error: Content is protected !!
Scroll to Top