ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ – ಅರಣ್ಯಾಧಿಕಾರಿ ಅಮಾನತು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಆ. 27. ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯ ಅಧಿಕಾರಿಯೋರ್ವರನ್ನು ಅರಣ್ಯ ಇಲಾಖೆಯು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಅಧಿಕಾರಿ ಚಂದನಗೌಡ ದ್ಯಾಮನಗೌಡರ ಎಂದು ತಿಳಿದುಬಂದಿದೆ. ಇವರು ಮೂಡಿಗೆರೆ ತಾಲೂಕಿನ ರಾಣಿಝರಿ ಪ್ರವಾಸಿ ತಾಣದ ಸಮೀಪದಿಂದ ಬಲ್ಲಾಳ ರಾಯನದುರ್ಗ ಮತ್ತು ಬಂಡಾಜೆ ಜಲಪಾತ ವೀಕ್ಷಣೆಗೆ ತೆರಳಲು ಆನ್ ಲೈನ್ ಮೂಲಕ 250 ರೂ. ಪಾವತಿಸಿ ಕಾಯ್ದಿರಿಸಲು ಅವಕಾಶವಿದೆ. ಈ ಚಾರಣದ ಉಸ್ತುವಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಆನ್ ಲೈನ್ ಟಿಕೆಟ್ ಮಾದರಿಯಲ್ಲೇ ಟಿಕೆಟ್ ಮುದ್ರಿಸಿ ಚಾರಣಿಗರಿಗೆ ನೀಡಿ ಅವರಿಂದ ಹಣವನ್ನು ಮೋನಿಕಾ ಎಂಬವರ ಖಾತೆಗೆ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿರುವುದಾಗಿ ಆರೋಪಿಸಲಾಗಿದೆ. 2024ರ ಜೂನ್ ನಲ್ಲಿ ಆನ್ ಲೈನ್ ಬುಕಿಂಗ್ ಮಾಡಿರುವ ಪಟ್ಟಿಗೂ ಚಾರಣದ ನೋಂದಣಿ ಪುಸ್ತಕದಲ್ಲಿರುವ ಪಟ್ಟಿಗೂ ತಾಳೆಯಾಗಿಲ್ಲ. ಒಂದು ಬುಕಿಂಗ್ ಐಡಿಯನ್ನು ನಕಲು ಮಾಡಿ ಹತ್ತಕ್ಕೂ ಹೆಚ್ಚು ನಕಲಿ ಟಿಕೆಟ್ ಮುದುರಿಸಿರುವುದು ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಇದನ್ನು ಆಧರಿಸಿ ಚಂದನಗೌಡ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಆದೇಶ ಹೊರಡಿಸಿದ್ದಾರೆ.

Also Read  ➤ ಹಣದುಬ್ಬರ ಮತ್ತೆ ಉಲ್ಬಣ, ರಿಸರ್ವ್ ಬ್ಯಾಂಕ್ ಅಸಮಾಧಾನ

error: Content is protected !!
Scroll to Top