(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27. ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಅಬಕಾರಿ ಇಲಾಖೆ ಮೂರು ವರ್ಷದಲ್ಲಿ ರಾಜ್ಯಾದ್ಯಂತ 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ಸಂಗ್ರಹಿಸಿದೆ ಎನ್ನಲಾಗಿದೆ.
ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ. ಎಂಎಸ್ ಐಎಲ್ ಅಂಗಡಿಗಳಲ್ಲಿ ಆರನೇ ಒಂದು ಭಾಗದಷ್ಟು ಉಲ್ಲಂಘನೆಗಳು ಕಂಡುಬಂದಿವೆ, ಇದರಂತೆ 1,003 ಪ್ರಕರಣಗಳಲ್ಲಿ ಇಲಾಖೆಯು ರೂ 1.88 ಕೋಟಿ ದಂಡವನ್ನು ಸಂಗ್ರಹಿಸಿದೆ ಮತ್ತು 20 ಪರವಾನಗಿಗಳನ್ನು ಅಮಾನತುಗೊಳಿಸಿದೆ ಎಂದು ವರದಿ ತಿಳಿದುಬಂದಿದೆ.