(ನ್ಯೂಸ್ ಕಡಬ) newskadaba.com ಯಾದಗಿರಿ, ಆ. 27. ಸಾಲಬಾಧೆ ತಾಳಲಾರದೇ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ತಿಪ್ಪಣ್ಣ ಕಟ್ಟಿಮನಿ (45) ಎಂದು ಗುರುತಿಸಲಾಗಿದೆ. ಬ್ಯಾಂಕ್ ಸಾಲ ಹಾಗೂ ಕೈ ಸಾಲ ಸೇರಿ ಒಟ್ಟು 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಇವರು ಸಾಲತೀರಿಸಲಾಗದೇ ಕಂಗಾಲಾಗಿದ್ದರು. ಇದರಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.