ಕೊಲೆ ಪ್ರಕರಣ..! ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.  ನಗರದಲ್ಲಿ ನಡೆದ ಕೊಲೆಯೊಂದಕ್ಕೆ ಎಚ್‌ಎಎಲ್ ತರಕಾರಿ ವ್ಯಾಪಾರಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ವಿಚಾರಣೆ ನಡೆಸಿದ ಅನೇಕ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ ನಂತರ ಪ್ರಕರಣ ಕೈ ಜಾರುವ ಹಂತದಲ್ಲಿತ್ತು. ಆದರೆ ಈಗ ಪ್ರತ್ಯಕ್ಷದರ್ಶಿ ಸಲ್ಮಾ ಅವರ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿತ್ತು. ತರಕಾರಿ ಮಾರುತ್ತಿದ್ದ ಸಲ್ಮಾ ಅಂಗಡಿಯಿಂದ ಕೇವಲ 10 ಅಡಿ ದೂರದಲ್ಲಿ ಕೊಲೆ ನಡೆದಿತ್ತು. ಆಕೆಯ ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆ ಅವಲಂಬಿಸಿ, ಆಕೆಯ ಸಾಕ್ಷಿ ಅರ್ಹವೆಂದು ಪರಿಗಣಿಸಿದ , ನ್ಯಾಯಾಲಯವು ಸಲ್ಮಾ ಅವರನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಪ್ರಕರಣವನ್ನು ಅಂಗೀಕರಿಸಿತು.  ಆರೋಪಿ ವಿಭೂತಿಪುರ ನಿವಾಸಿ ಮೊಹಮ್ಮದ್ ಅಮ್ಜದ್ (38) ಎಂಬಾತನಿಗೆ ಸಲ್ಮಾ ಹೇಳಿದ ಸಾಕ್ಷ್ಯಾಧಾರದ ಮೇಲೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ವಿಶ್ವ ಪರಿಸರ ದಿನಾಚರಣೆ

 

error: Content is protected !!
Scroll to Top