35 ಡಿವೈಎಸ್ಪಿ, 88 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ – ರಾಜ್ಯ ಸರಕಾರ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಒಟ್ಟು 35 ಡಿವೈಎಸ್ಪಿ, 88 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.


2 ವರ್ಷಗಳ ಕಾಲಾವಧಿ ನಿಯಮ ಜಾರಿಯಾದ ನಂತರ ಮೊದಲ ಬಾರಿಗೆ 35 ಡಿವೈಎಸ್ಪಿ ಮತ್ತು 88 ಇನ್ಸ್ಪೆಕ್ಟರ್ ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿದೆ. ಇನ್ಸ್ಪೆಕ್ಟರ್ ಮೇಲ್ಪಟ್ಟ ಅಧಿಕಾರಿಗಳ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ 2 ವರ್ಷಗಳ ಕಾಲಾವಧಿ ನಿಗದಿಗೊಳಿಸಿ ನಿಯಮ ಜಾರಿ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇನ್ಸ್ ಪೆಕ್ಟರ್ ಮೇಲ್ಮಟ್ಟದ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಎರಡು ವರ್ಷಗಳ ಕಾಲಾವಧಿ ಹೊಸ ನೀತಿ ಅನುಸಾರ ವರ್ಗಾವಣೆಗೆ ಚಾಲನೆ ನೀಡಲಾಗಿದೆ.

Also Read  ಇಂದೇ ನಿಮಗಿಷ್ಟದ ಬೈಕ್ ಖರೀದಿಸಿ, 2021ರಲ್ಲಿ ಹಣ ಪಾವತಿಸಿ...!! ➤ ಕಡಬದ ಅಡಿಗ ಟಿವಿಎಸ್ ನಿಂದ ಕೊರೋನಾ ಹಿನ್ನೆಲೆಯಲ್ಲಿ ವಿನೂತನ ಆಫರ್

error: Content is protected !!
Scroll to Top