ಕೊನೆಗೂ ಪಾಲೋಳಿ ಸರ್ವಋತು ಸೇತುವೆ ಸಂಚಾರಕ್ಕೆ ಮುಕ್ತ; ಎಡಮಂಗಲ, ಕಾಣಿಯೂರು, ಚಾರ್ವಾಕದವರಿಗೆ ಕಡಬ ತಲುಪುವುದು ಇನ್ನಷ್ಟು ಹತ್ತಿರ

(ನ್ಯೂಸ್ ಕಡಬ) newskadaba.com ಕಡಬ, ಆ. 27. ಕುಮಾರಧಾರಾ ನದಿಗೆ ಪಿಜಕ್ಕಳ ಸಮೀಪದ ಪಾಲೋಳಿ ಎಂಬಲ್ಲಿ ಊರವರ ಹಲವು ಕಾಲದ ಬೇಡಿಕೆಯಂತೆ ನಿರ್ಮಾಣಗೊಂಡಿದ್ದ ಸರ್ವಋತು ಸೇತುವೆಯು ಇಂದು ಸಂಚಾರಕ್ಕೆ‌ ಮುಕ್ತಗೊಂಡಿದೆ.

19.68 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ 175 ಮೀಟರ್ ಉದ್ದ 12 ಮೀಟರ್ ಅಗಲದ ಸೇತುವೆಯನ್ನು ಸುಳ್ಯ ಶಾಸಕಿ‌ ಭಾಗೀರಥಿ ಮುರುಳ್ಯ ಸಂಚಾರಕ್ಕೆ ಮುಕ್ತಗೊಳಿಸಿದರು. ಅಧಿಕೃತ ಉದ್ಘಾಟನೆ ಇನ್ನಷ್ಟೇ ಆಗಬೇಕಿದೆ. ಈ ಸೇತುವೆಯಿಂದಾಗಿ ಎಡಮಂಗಲ, ಕಾಣಿಯೂರು, ಚಾರ್ವಾಕ ಭಾಗದವರಿಗೆ ಸುಲಭವಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬಹುದಾಗಿದೆ.

Also Read  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಹಿತ ಹಲವು ಅಧಿಕಾರಿಗಳಿಗೆ ಲೋಕಾಯುಕ್ತದಿಂದ ನೋಟಿಸ್

error: Content is protected !!
Scroll to Top