ಆಧಾರ್ ಉಚಿತ ಅಪ್ಡೇಟ್ ಗೆ ಸೆ. 14 ಕೊನೆಯ ದಿನ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ಶಾಲಾ- ಕಾಲೇಜಿಗೆ ಪ್ರವೇಶ ಪಡೆಯುವುದರಿಂದ ಹಿಡಿದು ಪಾನ್ ಕಾರ್ಡ್ ಪಡೆಯುವವರೆಗೆ ಮತ್ತು ಸರ್ಕಾರದ ಯೋಜನೆಗಳಲ್ಲಿ ಆಧಾರ್ ಕಾರ್ಡಿನ ಉಪಯೋಗ ಬಹಳಷ್ಟಿದೆ.

ಜನರು ಬಯಸದೆಯೂ ಸಹ ಈ ಪ್ರಮುಖ ದಾಖಲೆಯನ್ನು ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೆಲವು ತಪ್ಪುಗಳಿದ್ದರೆ, ಅದನ್ನು ಉಚಿತವಾಗಿ ನವೀಕರಿಸಲು ನಿಮಗೆ ಇದೀಗ ಅವಕಾಶವಿದೆ. ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ಅನ್ನು ನವೀಕರಿಸದ ಜನರು ಅದನ್ನು ಸೆಪ್ಟೆಂಬರ್ 14 ರವರೆಗೆ ಉಚಿತವಾಗಿ ನವೀಕರಿಸಬಹುದು. ಇದಾದ ನಂತರ ಆಧಾರ್ ಅಪ್ ಡೇಟ್ ಮಾಡಲು 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದ್ದರಿಂದ ನೀವು ಈಗಲೇ ಹೋಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕು.

Also Read  ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ

error: Content is protected !!
Scroll to Top