ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ದ.ಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ 2024ರ ಕಾರ್ಯಕ್ರಮವು ವೆನ್‍ ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಆರ್ ತಿಮ್ಮಯ್ಯ ಮಾತನಾಡಿ, ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬೂದಿಯಾಗುವ ಬದಲು ನೇತ್ರದಾನ ಮೂಲಕ ಇಬ್ಬರು  ಅಂಧರಿಗೆ  ಬೆಳಕನ್ನು ನೀಡುವ ಮೂಲಕ ಜೀವ ಸಾರ್ಥಕತೆಯನ್ನು  ಪಡೆಯಬೇಕು. ಉಸಿರು ಶಾಶ್ವತವಲ್ಲ ಹೆಸರು ಮಾತ್ರ ಶಾಶ್ವತ. ನಮ್ಮ ಹೆಸರು ಶಾಶ್ವತವಾಗಬೇಕಾದರೆ ನಮ್ಮ ಸಾವಿನ ನಂತರ ಅಂಗಾಂಗದಾನ/ ನೇತ್ರದಾನದ ಮೂಲಕ ನೇತ್ರದಾನ ಮಹಾದಾನ ನೇತ್ರದಾನ  ಮನೆತನದ ಸಂಸ್ಕೃತಿಯಾಗಿ ಮಾಡೋಣ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೆನ್‍ ಲಾಕ್  ಸ್ಥಾನಿಕ ವೈದ್ಯಾಧಿಕಾರಿಗಳು  ಡಾ|| ಸುಧಾಕರ್ ಇವರು ಮಾತನಾಡಿ, ನೇತ್ರದಾನ ಮಾಡುವುದು ಮರಣದ ನಂತರ, ಮರಣದ ಬಗ್ಗೆ ಹೆದರಬಾರದು ಎಲ್ಲರೂ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವ. ಮುಂದಿನ ದಿನಗಳಲ್ಲಿ ನೇತ್ರದಾನದ ಕೊರತೆಯಾಗಂದತೆ ಮಾಡಬೇಕಾದರೆ ನಾವೆಲ್ಲರೂ ಇಂದೆ ನೇತ್ರದಾನ ನೋಂದಾವಣೆ ಮಾಡಲು ಸೂಚಿಸಿದರು.

Also Read  11 ವರ್ಷಗಳ ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸ್ನೇಹ ಸಮ್ಮಿಲನ

 

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಜ್ಯೋತಿ ಕೆ. ಮಾತನಾಡಿ, ಈ ವರ್ಷದ ಘೋಷಣೆ “ನಾನು ಈಗ ಸ್ಪಷ್ಟವಾಗಿ ನೋಡುತ್ತೇನೆ”  ಎಂಬ ಘೋಷಣೆಯಂತೆ  ನೇತ್ರದಾನದ ಮಹತ್ವವನ್ನು ತಿಳಿಸಿದರು. 39 ನೇ ರಾಷ್ಟ್ರೀಯ ಅಂಧತ್ವ ನೇತ್ರ ದಿನ ಕಾರ್ಯಕ್ರಮದ ಪಾಕ್ಷಿಕ ಆಗಸ್ಟ್ 25 ರಂದು ಆರಂಭವಾಗಿ ಸಪ್ಟೆಂಬರ್ 08 ರವರೆಗೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನೇತ್ರದಾನದ ಮಹತ್ವ, ಅರಿವು, ಜಾಗೃತಿಯನ್ನು ಸಮಾಜದಲ್ಲಿ ಮೂಡಿಸಬೇಕಾಗಿದೆ. ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವ್ಯಾಪಕವಾಗಿ ಪ್ರಚಾರ/ ಜಾಗೃತಿಯ ಮೂಲಕ ನೇತ್ರದಾನದ ನೊಂದಾವಣೆಯನ್ನು ಮಾಡಿಸಬೇಕಾಗಿದೆ. ಹೆಚ್ಚಿನ ನೊಂದಾವಣೆ ಮೂಲಕ ನಮ್ಮ ಜಿಲ್ಲೆ ಮಾದರಿಯಾಗಲಿ  ಎಂದರು. ಡಾ|| ಸೌಮ್ಯ ನೇತ್ರ ತಜ್ಞರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನೇತ್ರದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ|| ಅನಿತಾ ಕಿರಣ್ ಹಿರಿಯ ನೇತ್ರ ತಜ್ಞರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಹಾಗೂ ಕಚೇರಿ ಸಿಬ್ಬಂದಿಗಳು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅನುಷ್ಠಾನಾಧಿಕಾರಿ  ಡಾ|| ಸುದರ್ಶನ್ ವಂದಿಸಿದರು.

Also Read  ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಲೀಸ್ ಗೆ ಕೊಡದಂತೆ ಮನವಿ

error: Content is protected !!
Scroll to Top