ಐಟಿಐ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮಂಗಳೂರಿನ ಸರ್ಕಾರಿ ಐಟಿಐ ಮಹಿಳಾ ಸಂಸ್ಥೆಯಲ್ಲಿ ತರಬೇತಿಗಾಗಿ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಕರ್ನಾಟಕದಲ್ಲಿ 5 ವರ್ಷ ವ್ಯಾಸಂಗ ಮಾಡಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅಗಸ್ಟ್ 31ರವರೆಗೆ ಪ್ರವೇಶಕ್ಕಾಗಿ  ಅರ್ಜಿ ಆಹ್ವಾನಿಸಲಾಗಿದೆ.


ಖಾಲಿ ಇರುವ ಸೀಟುಗಳ ವಿವರ

ಎಲೆಕ್ಟ್ರಾನಿಕ್ ಮೆಕ್ಯಾನಿಕ್ ತರಬೇತಿ ಅವಧಿ 2 ವರ್ಷ, ಖಾಲಿ ಇರುವ ಸೀಟುಗಳು 18

ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ತರಬೇತಿ ಅವಧಿ ಎರಡು ವರ್ಷ,  ಖಾಲಿ ಇರುವ ಸೀಟುಗಳು 10. ಎಲೆಕ್ಟ್ರಿಷಿಯನ್ – ತರಬೇತಿ ಅವಧಿ 2ವರ್ಷ ಖಾಲಿಯಿರುವ ಸೀಟುಗಳು 7.

ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್– ತರಬೇತಿ ಅವಧಿ 1 ವರ್ಷ, ಖಾಲಿ ಇರುವ ಸೀಟುಗಳು 37.

Also Read  ವಿಟ್ಲ: ಭಜರಂಗದಳ ಮುಖಂಡನ ಮೇಲೆ ಮಾರಕಾಸ್ತ್ರದಿಂದ ದಾಳಿ..!!

ಇಂಡಸ್ಟ್ರಿಯಲ್ ರೋಬೋಟಿಕ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ – ತರಬೇತಿಯ ಅವಧಿ ಒಂದು ವರ್ಷ, ಖಾಲಿ ಇರುವ ಸೀಟುಗಳು 20

ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 9880119147, 9448858417 ಸಂಪರ್ಕಿಸುವಂತೆ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top