ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ- ದರ್ಶನ್ ಸೇರಿ ಮೂವರ ವಿರುದ್ಧ FIR ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 26. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ಆರೋಪಿ ನಟ ದರ್ಶನ್‌ ರಾಜಾರೋಷವಾಗಿ ಇರುವ ಫೋಟೋ, ವೀಡಿಯೋ ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ದರ್ಶನ್‌ ಸಿಗರೇಟು ಹಿಡಿದು, ಒಂದು ಕೈಯಲ್ಲಿ ಕಪ್‌ ಹಿಡಿದು ಕೂತಿರುವ ಫೋಟೋ ವೈರಲ್‌ ಆದ ಬೆನ್ನಲ್ಲೇ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಲೋಪವೆಸಗಿದ 7 ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅಲ್ಲದೇ ಫೋಟೋ ಹಾಗೂ ಸಿಗರೇಟು ವಿಷಯಕ್ಕೆ ಸಂಬಂಧಿಸದಂತೆ ಪರಪ್ಪನ ಅಗ್ರಹಾರ  ಠಾಣೆಯಲ್ಲಿ ಇದೀಗ 3 ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ.

Also Read  ಮಾ. 31ರಿಂದ ಏ. 15ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ➤ KSRTCಯಿಂದ ಉಚಿತ ಪ್ರಯಾಣಕ್ಕೆ ಅವಕಾಶ

ನಟ ದರ್ಶನ್‌, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ನಾಗರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಿಗರೇಟು ಕೊಟ್ಟಿದ್ದಕ್ಕೆ ಮೊದಲ ಎಫ್‌ಐಆರ್‌, ವಿಡಿಯೋ ಮಾಡಿ ವೈರಲ್‌ ಮಾಡಿದ್ದಕ್ಕೆ ಎರಡನೇ ಎಫ್‌ಐಆರ್‌, ಮೂರನೇ ಎಫ್‌ಐಆರ್‌ ಸಿಸಿಬಿ ದಾಳಿ ವೇಳೆ ಬಾಕ್ಸ್‌ ತೆಗೆದುಕೊಂಡು ಹೋಗಿದ್ದಕ್ಕೆ ಎನ್ನಲಾಗಿದೆ. ಈ ಮೂರು ಪ್ರಕರಣದಲ್ಲಿ ದರ್ಶನ್‌ ಅವರನ್ನು ಆರೋಪಿಯನ್ನಾಗಿ ಉಲ್ಲೇಖ ಮಾಡಲಾಗಿದೆ ಎಂದು ವರದಿಯಾಗಿದೆ.

error: Content is protected !!
Scroll to Top