(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಆ. 26. ಭಾರತೀಯ ಮೂಲದ ಖ್ಯಾತ ವೈದ್ಯರೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಕುರಿತು ಅಮೇರಿಕಾದಿಂದ ವರದಿಯಾಗಿದೆ.
ಹತ್ಯೆಗೊಳಗಾದವರನ್ನು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾದ ಡಾ. ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ರವರು ಕ್ರಿಮ್ಸನ್ ನೆಟ್ ವರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ಗುಂಪಿನ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅಲಬಾಮಾದ ಟಸ್ಕಲೂಸಾ ಎಂಬ ನಗರದಲ್ಲಿ ಭಾರತೀಯ ಮೂಲದ ವೈದ್ಯರ ಮೇಲೆ ಅಮೆರಿಕದಲ್ಲಿ ಗುಂಡು ಹಾರಿಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.