ದೇವಾಸ್ಥಾನದ ವಿಗ್ರಹ ವಿರೂಪ..! 12 ಮನೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!   

(ನ್ಯೂಸ್ ಕಡಬ) newskadaba.c0m ಅಗರ್ತಲಾ, ಆ. 26.  ಪಶ್ಚಿಮ ತ್ರಿಪುರಾದ ರಾಣೀರ್ ಬಜಾರ್ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಿರುವ ವಿಚಾರ ತಿಳಿದ ನಂತರ ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿರಾನಿಯಾ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಮತ್ತು ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. “ಕೈತೂರ್ಬಾರಿಯಲ್ಲಿ ಕಾಳಿ ದೇವಿಯ ವಿಗ್ರಹವು ವಿರೂಪಗೊಂಡಿರುವುದು ಕಂಡುಬಂದ ನಂತರ ಭಾನುವಾರ ತಡರಾತ್ರಿ ರಾಣಿರ್‌ಬಜಾರ್‌ ನಲ್ಲಿ ಸುಮಾರು 12 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

Also Read  ಕರಾಚಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉಗ್ರ ದಾಳಿ ➤ಐವರು ಉಗ್ರರು ಸೇರಿ 9 ಮಂದಿ ಮೃತ್ಯು

 

 

 

error: Content is protected !!
Scroll to Top