ಟಿ20 ಟೂರ್ನಿಯಲ್ಲಿ 36 ಸಿಕ್ಸ್ ಹೊಡೆದು ಹೊಸ ದಾಖಲೆ ನಿರ್ಮಿಸಿದ ಅಭಿನವ್ ಮನೋಹರ್

(ನ್ಯೂಸ್ ಕಡಬ) newskadaba.c0m ಮುಂಬೈ, ಆ. 26.  ಮಹಾರಾಜ ಟಿ20 ಟೂರ್ನಿಯಲ್ಲಿ 36 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಅಭಿನವ್ ಮನೋಹರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಶಿವಮೊಗ್ಗ ಲಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಮನೋಹರ್ ಈವರಗೆ 200 ಎಸೆತಗಳನ್ನು ಎದುರಿಸಿದ್ದಾರೆ.

ಈ ಮೂಲಕ ಟ್ರೋಫಿ ಟಿ20 ಟೂರ್ನಿಯ ಒಂದೇ ಸೀಸನ್​ ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯನ್ನು ಅಭಿನವ್ ಮನೋಹರ್ ತಮ್ಮದಾಗಿಸಿಕೊಂಡಿದ್ದು, ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಮೊಹಮ್ಮದ್ ತಾಹ ಹೆಸರಿನಲ್ಲಿತ್ತು. 2023ರ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ತಾಹ 12 ಪಂದ್ಯಗಳಿಂದ ಒಟ್ಟು 32 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಅಭಿನವ್ ಮನೋಹರ್ ಯಶಸ್ವಿಯಾಗಿದ್ದಾರೆ.

Also Read  ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ - ಪ್ರಧಾನಿ ಮೋದಿ ಅಭಿನಂದನೆ

 

 

error: Content is protected !!
Scroll to Top