ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ  ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 26.  ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂಧರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಕೃಷ್ಣನ ತೊಟ್ಟಿಲು ತೂಗಿ ಭಕ್ತಿಯಿಂದ ದೇವರ ದರ್ಶನ ಮಾಡಿದರು.

ಬಳಿಕ ಮಾತನಾಡಿದ ಅವರು – ‘ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ರಕ್ಷಿಸುವುದು ಕೃಷ್ಣನ ಕೆಲಸ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸೋ ಕೆಲಸ ಕೃಷ್ಣ ಮಾಡ್ತಾನೆ ಅನ್ನೋ ವಿಶ್ವಾಸವಿದೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಲಿ’ ಎಂದು ಹೇಳಿದ್ದಾರೆ.

Also Read  ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್  ಸವಾರನಿಗೆ ಏಟು ನೀಡಿ ಬುದ್ಧಿ ಕಲಿಸಿದ ಯೋಧ   

 

 

error: Content is protected !!
Scroll to Top