(ನ್ಯೂಸ್ ಕಡಬ) newskadaba.com ಪ್ಯಾರಿಸ್, ಆ. 26. ಟೆಲಿಗ್ರಾಮ್ ಪ್ಲಾಟ್ ಫಾರ್ಮ್ ಗೆ ಸಂಬಂಧಪಟ್ಟ ಅಪರಾಧಗಳಿಗೆ ಸಂಬಂಧಿಸಿದ ವಾರಂಟ್ ಅಡಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್ ಅವರನ್ನು ಫ್ರೆಂಚ್ ಅಧಿಕಾರಿಗಳು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ಮೂಲಗಳು ಮಾಹಿತಿ ನೀಡಿದ್ದಾರೆ.
ದುರೋವ್ ಅವರ ಬಂಧನದ ಸುದ್ದಿ ಕೇಳಿ ಕೆಲವು ರಷ್ಯಾದ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಫ್ರಾನ್ಸ್ ನ ಕ್ರಮವನ್ನು ಖಂಡಿಸಿದ್ದಾರೆ. ವಿಶ್ವಾದ್ಯಂತ ಫ್ರೆಂಚ್ ರಾಯಭಾರ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಆಪ್ ಅನ್ನು ಉಕ್ರೇನ್ ನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರು ಹೆಚ್ಚಾಗಿ ಬಳಸುತ್ತಾರೆ. ಇಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಶೋಧಿಸದ ಮಾಹಿತಿಯ ಮೂಲವಾಗಿ ಟೆಲಿಗ್ರಾಮ್ ಪ್ರಾಮುಖ್ಯತೆ ಪಡೆದಿದೆ.