ಜಮೀನಿನಲ್ಲಿ ಸಿಕ್ಕಿದ ವಜ್ರ ರೈತ ರಾತ್ರೋರಾತ್ರಿ ಕೋಟ್ಯಾಧಿಪತಿ

(ನ್ಯೂಸ್ ಕಡಬ) newskadaba.c0m ಕರ್ನೂಲು, ಆ. 26.  ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿಯ ರೈತ ಬೋಯ ರಾಮಾಂಜನೇಯುಲು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಜ್ರ ಸಿಕ್ಕಿದೆ. ಇದರಿಂದ ರೈತ ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ ಎಂದು ವರದಿಯಾಗಿದೆ.

ರಾಮಾಂಜನೇಯುಲು ಮತ್ತು ಅವರ ಸಹೋದರ ಶೇಖರ್‌, ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿರುವವರು. ಸಾಗುವಳಿ ಇಲ್ಲದಿದ್ದಾಗ ವಾಹನ ಚಾಲಕರಾಗಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಬೋಯ ರಾಮಾಂಜನೇಯಲು ಎಂಬುವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಕ್ಕಿದ ವಜ್ರವನ್ನು ಜೊನ್ನಗಿರಿಯ ವಜ್ರದ ವ್ಯಾಪಾರಿಗೆ ತೋರಿಸಿದ್ದು, ವ್ಯಾಪಾರಿ 12 ಲಕ್ಷ ರೂ.ನಗದು ಹಾಗೂ ಐದು ತೊಲ ಚಿನ್ನ ನೀಡಿದ್ದಾನೆ ಎನ್ನಲಾಗಿದೆ.

Also Read  ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ ➤ ಗಿರಿರಾಜ ಕೋಳಿ ವಿತರಣೆ

 

error: Content is protected !!
Scroll to Top