(ನ್ಯೂಸ್ ಕಡಬ) newskadaba.com ಉಡುಪಿ, ಆ. 26. ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ರಕ್ತಪರೀಕ್ಷೆ ವರದಿ ಬಂದಿದ್ದು, ವರದಿಯ ಪ್ರಕಾರ ಆಕೆಯ ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ಯಾಚಾರ ಎಸಗಿರುವ ಆರೋಪಿಗಳಾದ ಅಲ್ತಾಫ್ ಹಾಗೂ ಮತ್ತೋರ್ವ ಆರೋಪಿಯ ರಕ್ತ ಪರೀಕ್ಷೆಯಲ್ಲಿ ಮಾದಕ ಅಂಶ ಪತ್ತೆಯಾಗಿಲ್ಲ. ಯುವತಿ ರಕ್ತದಲ್ಲಿ ಪಾಸಿಟಿವ್ ಬಂದಿರುವ ಬಗ್ಗೆ ಆರೋಪಿ ಅಲ್ತಾಫ್ ನನ್ನು ವಿಚಾರಣಗೆ ಒಳಪಡಿಸಲಾಗಿದ್ದು, ಅವನು ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿದ್ದು ಎಂದು ತಿಳಿಸಿದ್ದಾನೆ. ಬಳಿಕ ಆರೋಪಿ ಅಲ್ತಾಫ್ ತೋರಿಸಿದ ಪುಡಿಯನ್ನು ಪೊಲೀಸರು ಎಫ್ಎಸ್‌ಎಲ್ ಗೆ ಕಳುಹಿಸಲಾಗಿದ್ದು, ಅದು ಯಾವ ಡ್ರಗ್ಸ್ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಸಂತ್ರಸ್ತೆಯ ರಕ್ತದಲ್ಲಿ ಪತ್ತೆಯಾಗಿರುವುದು ಇದರದ್ದೇ ಅಂಶವೇ ಎಂಬ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ.ಅರುಣ್ ತಿಳಿಸಿದ್ದಾರೆ.