ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಪೂಜಿ ನಗರದಲ್ಲಿ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿನಿ ಅಲ್ ಫಹಾದ್ ಎಜುಕೇಶನ್ ಸೆಂಟರ್‌ನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ.

ವಿದ್ಯಾರ್ಥಿನಿಯನ್ನು ಕೂಡಲೇ ಶಾಲಾ ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ಮತ್ತು ನಂತರ ಜಯನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕರೆದೊಯ್ದಿದ್ದಾರೆ. ಜಿಗಿಯುವ ಮುನ್ನ ಆಕೆ ತನ್ನ ಕ್ಲಾಸ್ ಮೇಟ್ ಗೆ ಹೇಳಿದ್ದಳು ಎನ್ನಲಾಗಿದೆ. ಆಕೆಯ ಕಾಲು ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿವೆ. ಜಯನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

Also Read  ಮಸೀದಿ, ಮದರಸ- ವಕ್ಫ್ ಮಂಡಳಿಯಲ್ಲಿ ನೋಂದಣಿ

error: Content is protected !!
Scroll to Top