ವೃದ್ಧ ಮಹಿಳೆಯನ್ನು 20 ಮೀಟರ್ ಎಳೆದೊಯ್ದು ಸರ ಕಳ್ಳತನ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳನೊಬ್ಬ ವೃದ್ಧ ಮಹಿಳೆಯನ್ನು 20 ಮೀಟರ್ ವರೆಗೆ ಎಳೆದೊಯ್ದು ಸರಗಳ್ಳತನ ಮಾಡಿರು ಘಟನೆಯೊಂದು ನಗರದ ಕೆಂಗೇರಿಯಲ್ಲಿ ವರದಿಯಾಗಿದೆ.

ಮುದ್ದಮ್ಮ (73) ಸರ ಕಳೆದುಕೊಂಡ ವೃದ್ಧ ಮಹಿಳೆಯಾಗಿದ್ದಾರೆ. ಘಟನೆಯಿಂದಾಗಿ ಮಹಿಳೆಯ ಎಡಗೈ ಮೂಳೆ ಮುರಿತಕ್ಕೊಳಗಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಮುದ್ದಮ್ಮ ಅವರು ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿದ್ದಾನೆ. ಈ ವೇಳೆ ಮಹಿಳೆ ವಿಳಾಸ ಹೇಳುತ್ತಿದ್ದಾಗ ಆಕೆಯ ಸರ ಕಸಿಯಲು ಯತ್ನಿಸಿದ್ದಾನೆ ಮತ್ತು ಬಳಿಕ ಸರ ಕಸಿದು, ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ

 

error: Content is protected !!
Scroll to Top