’ಬಿಜೆಪಿ ಏನೇ ಆರೋಪ ಮಾಡಿದರು ತಲೆಕೆಡಿಸುವ ಅಗತ್ಯವಿಲ್ಲ’  ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ   

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 24.  ಬಿಜೆಪಿಗೆ ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ. ಬಿಜೆಪಿ ಏನೇ ಆರೋಪ ಮಾಡಿದರು ತಲೆಕೆಡಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ ನೀಡಿದೆ ಎನ್ನಲಾಗಿದೆ.

ರಾಜ್ಯ ರಾಜಕೀಯದಲ್ಲಿ ಸಂಚಾಲನವನ್ನೆ ಉಂಟು ಮಾಡಿರುವ ಮುಡಾ ಪ್ರಕರಣ ಇದೀಗ ದೆಹಲಿಗೆ ತಲುಪಿದ್ದು, ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಬಗ್ಗೆ ಸಿಎಂ-ಡಿಸಿಎಂ ಕಾಂಗ್ರೆಸ್ ಹೈಕಮಾಂಡ್‌ ಜೊತೆ ಚರ್ಚಿಸಿದ್ದಾರೆ. ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ  ವರದಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಕೇಳಿದ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ ಎಂದು ವರದಿ ತಿಳಿಸಿದೆ.

Also Read  ಅಪ್ಪನಿಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ.!! ➤ 1.14 ಕೋಟಿ ರೂ.ಹಣ ವಸೂಲಿ ಮಾಡಿದ 24 ವರ್ಷದ ಮಗ

 

 

error: Content is protected !!
Scroll to Top