ನೂತನ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ಮೂಲದ ಡಿ .ಶಿಲ್ಪಾ ನೇಮಕ

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 24. ಕಾಸರಗೋಡು ಜಿಲ್ಲಾ ನೂತನ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ಮೂಲದ ಡಿ .ಶಿಲ್ಪಾ ಅಧಿಕಾರ ವಹಿಸಿಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಿ . ಬಿಜೋಯ್ ರವರನ್ನು ತಿರುವನಂತಪುರಕ್ಕೆ ವರ್ಗಾಹಿಸಲಾಗಿದ್ದು , ಇವರ ಬದಲಿಗೆ ಶಿಲ್ಪಾ ರವರನ್ನು ನೇಮಿಸಲಾಗಿದೆ.

ಶಿಲ್ಪಾ ಎರಡನೇ ಬಾರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಶಿಲ್ಪಾ 2020 ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದಕ್ಷ ಸೇವೆ ನೀಡಿದ್ದು, ಬಳಿಕ 2021 ರಲ್ಲಿ ವರ್ಗಾವಣೆಗೊಳಿಸಲಾಗಿತ್ತು ಎನ್ನಲಾಗಿದೆ.

Also Read  ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ಘಟನೆ

 

error: Content is protected !!
Scroll to Top