ಪತ್ನಿಯ ರೀಲ್ಸ್ ಹುಚ್ಚಾಟದಿಂದ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಪತಿ..!

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 24.  ರೀಲ್ಸ್ ಹುಚ್ಚಿಗೆ ಬಿದ್ದಿದ್ದ ಪತ್ನಿಯನ್ನು ಕತ್ತಿಯಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ನಡೆದಿದೆ. ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೃತ ಮಹಿಳೆಯನ್ನು 28 ವರ್ಷದ ಜಯಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ 30 ವರ್ಷದ ಕಿರಣ್ ಉಪಾಧ್ಯನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇಂದು ಬೆಳಗ್ಗೆ ಕೊಲೆ ಮಾಡಿದ್ದಾನೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: ಸಚಿನ್‌ ಪ್ರತಾಪ್‌ ರವರನ್ನು ಭಾರತದ ಕಬಡ್ಡಿ ತಂಡಕ್ಕೆ ಅವಕಾಶ ಕಲ್ಪಿಸುವಂತೆ ಮನವಿ

 

 

error: Content is protected !!
Scroll to Top