ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವೋಟು ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ `ದೇಕೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್ -2024` ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕಾರ್ಯಕ್ರಮದ ಭಾಗವಾಗಿ ನಾಗರಿಕರು ಹಾಗೂ ಪ್ರವಾಸಿಗರು ಆಧ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಮೈ ಗವರ್ನಮೆಂಟ್ ವೇದಿಕೆಯಡಿ ಅವಕಾಶ ಕಲ್ಪಿಸಲಾಗಿದ್ದು, ನಾಗರಿಕರು ಹಾಗೂ ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 15 ರವರೆಗೆ ವೋಟು ಮಾಡುವ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಆಧ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಲು ತಾವು ಈಗಾಗಲೇ ಭೇಟಿ ನೀಡಿರುವ ಕನಿಷ್ಟ ಒಂದು ಪ್ರೇಕ್ಷಣೀಯ ಸ್ಥಳವನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ ಮತ್ತು ತಾವು ಭವಿಷ್ಯದಲ್ಲಿ ಭೇಟಿ ನೀಡಲು ಬಯಸುವ ಕನಿಷ್ಟ 1 ಪ್ರೇಕ್ಷಣೀಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವೇಳೆ ಲಿಂಕ್ ನಲ್ಲಿ ತಮ್ಮ ಮೊಬೈಲ್ ನಂಬರ್, ಹೆಸರು, ವಯಸ್ಸು, ರಾಜ್ಯ ಸೇರಿದಂತೆ ಪ್ರಾಥಮಿಕ ಮಾಹಿತಿ ಪೂರ್ತಿ ಮಾಡಿ ಓಟಿಪಿ ಮೂಲಕ ಲಾಗಿನ್ ಆಗಿ ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್ ಮಾಡಬಹುದಾಗಿದೆ.  ದೇಶದ ಹಲವು ಪ್ರವಾಸಿ ತಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸೇರಿಸಲಾಗಿದೆ.

Also Read  ಶೀಘ್ರದಲ್ಲೇ ಮಂಗಳೂರು- ಬೆಂಗಳೂರು ವಂದೇ ಭಾರತ್ ರೈಲು ಪ್ರಾರಂಭ

ಇದರಿಂದ ಗುರುತಿಸಲಾದ ವಿಜೇತ ಪ್ರೇಕ್ಷಣೀಯ ತಾಣಗಳನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವುದರೊಂದಿಗೆ ಇದು ಭಾರತದ ವೀಕ್ಷಿತ್ ಭಾರತ್ @ 2047 ಕಡೆ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ. ವೋಟಿಂಗ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದಿಂದ ಅವರ ಹೆಸರಿನಲ್ಲಿ ಇ-ಪ್ರಮಾಣ ಪತ್ರ ನೀಡಲಾಗುತ್ತದೆ. ಸಾರ್ವಜನಿಕರು https;//innovateindia.mygov.in/dekho-apna-desh/login/ ವೆಬ್ ಲಿಂಕ್ ಬಳಸಿ ಜಿಲ್ಲೆಯ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸ್ಕೂಟರ್- ಕಾರು ಡಿಕ್ಕಿ ➤ಯುವಕ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top