ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರನ್ನು ‘ಬಂಡಲ್ ಷಾ’ ಎಂದ ಪುತ್ತೂರಿನ ಕಾಲೇಜು ವಿದ್ಯಾರ್ಥಿ ಸಸ್ಪೆಂಡ್ ► ಚರ್ಚೆಗೆ ಗ್ರಾಸವಾದ ಆಡಳಿತ ಮಂಡಳಿಯ ನಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.24. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಬಂಡಲ್ ಷಾ’ ಎಂದು ಟೀಕಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಿದ ಘಟನೆ ಇದೀಗ ವರದಿಯಾಗಿದೆ.

ಕಳೆದ ಮಂಗಳವಾರದಂದು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮ ನಡೆದಿತ್ತು. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬ ಅಮಿತ್ ಷಾ ಅವರನ್ನು ‘ಬಂಡಲ್ ಷಾ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಯನ್ನು ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳ ನಡುವೆ ಇನ್ನಷ್ಟು ಗೊಂದಲ ಆಗುವುದು ಬೇಡ ಎಂಬ ಕಾರಣಕ್ಕಾಗಿ ಒಂದು ವಾರಗಳ ಕಾಲೇಜಿಗೆ ಬರುವುದು ಬೇಡ ಎಂದು ವಿದ್ಯಾರ್ಥಿಯನ್ನು ರಜೆಯಲ್ಲಿ ಕಳುಹಿಸಲಾಗಿದೆ ಎಂದು ಕಾಲೇಜಿನ ಉಪನ್ಯಾಸಕರೋರ್ವರು ಸ್ಪಷ್ಟಪಡಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಲಾರಂಭಿಸಿದ್ದು, ಹಲವಾರು ಪ್ರತಿಕ್ರಿಯೆಗಳೊಂದಿಗೆ ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Also Read  ಉಳ್ಳಾಲ: ಫ್ಲೈಓವರ್ ಮೇಲೆ ಬಿದ್ದ ಬೃಹತ್ ಗಾತ್ರದ ಪೈಪ್ ➤ ತೆರವುಗೊಳಿಸಿದ ಸಂಚಾರಿ ಪೊಲೀಸರು

error: Content is protected !!
Scroll to Top