ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. 2024-25ನೇ ಸಾಲಿಗೆ Cerebral Palsy, Muscular Dystrophy, Parkinsons & Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ. 1,000 ಪ್ರೋತ್ಸಾಹ ಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ (UDID), ವಿಕಲತೆಯ ಪ್ರಮಾಣ ಶೇ.75% ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು, ವಯಸ್ಸಿನ ಮಿತಿ ಇರುವುದಿಲ್ಲ, ವಿಕಲಚೇತನರ ಹಾಗೂ ಆರೈಕೆದಾರರ ಆಧಾರ್ ಕಾರ್ಡ್, ಜಂಟಿ ಭಾವಚಿತ್ರ ಹಾಗೂ ಆರೈಕೆದಾರರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಲಗತ್ತಿಸಿ ಸಲ್ಲಿಸುವುದು. ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂ ವಿ.ಆರ್.ಡಬ್ಲ್ಯೂ ಗಳಿಂದ ಪಡೆದು ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸೆಪ್ಟೆಂಬರ್ 20 ರೊಳಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಅಶೋಕನಗರ ಅಂಚೆ, ಕೊಟ್ಟಾರ, ಮಂಗಳೂರು ಕಛೇರಿ ಅಥವಾ ದೂರವಾಣಿ ಸಂಖ್ಯೆ: 0824-2455999 ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ಇಂದು ಹಳೆ ಬಂದರ್ ನಿಂದ ಮಾಲ್ದೀವ್ಸ್ ಗೆ ಪ್ರಥಮ ಸರಕು ನೌಕೆ ಯಾನ

error: Content is protected !!
Scroll to Top