ಆನ್‌ಲೈನ್‌ ಟ್ರೇಡಿಂಗ್‌ ಮೋಸ..!  4 ಆರೋಪಿಗಳು ಅರೆಸ್ಟ್..!     

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 23.  ಆನ್‌ಲೈನ್‌ ಟ್ರೇಡಿಂಗ್‌ ಮೋಸದ ಕುರಿತು ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಜನ ಆರೋಪಿಗಳನ್ನು ಬಂಧಿಸಿ, ರೂ. 13,00,000/- ನಗದು ವಶಪಡಿಸಿಕೊಳ್ಳಲಾಗಿದೆ.

ಉಪೇಂದ್ರಭಟ್ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಅವರನ್ನು ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್ ಗ್ರೂಪ್‌ ಗೆ ಸೇರಿಸಿದ್ದಾರೆ ಎಂದು ನಂಬಿಸಿ, WhatsApp ಮೂಲಕ ಲಾಭಾಂಶಗಳ ಬಗ್ಗೆ ಮಾಹಿತಿ ನೀಡಿ‌ ಅವರಿಗೆ VIP-203-845 ಎಂಬ ಅಕೌಂಟ್ ನಂಬರನ್ನು ನೀಡಿದ್ದಾರೆ. ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಒಟ್ಟು ರೂ. 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೆನ್ ಉಡುಪಿ ಪೊಲೀಸ್ ಠಾಣೆಯಲ್ಲಿ ಠಾಣಾ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯ ವೇಳೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಪ್ರಮುಖ ಸೂತ್ರದಾರರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

Also Read  ಗೃಹಜ್ಯೋತಿ ಯೋಜನೆಗೆ ಆ. 05 ರಂದು ಚಾಲನೆ

 

 

 

 

error: Content is protected !!
Scroll to Top