ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಸಂಚು    14 ಆರೋಪಿಗಳು ಅರೆಸ್ಟ್       

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 23.  ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಉದ್ದೇಶ ಹೊಂದಿದ್ದ 14 ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ ಖೈದಾ ಪ್ರೇರಿತ ಭಯೋತ್ಪಾದನಾ ಘಟಕವನ್ನು ಭೇದಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

 

ಗುಪ್ತಚರ ಮಾಹಿತಿ ಪಡೆದ ನಂತರ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಭೇದಿಸಲಾದ ಮಾಡ್ಯೂಲ್‌ಗೆ ಜಾರ್ಖಂಡ್‌ನ ರಾಂಚಿಯ ಡಾ। ಇಶ್ತಿಯಾಕ್ ಎಂಬಾತ ನೇತೃತ್ವ ವಹಿಸಿದ್ದು, ಇದು ‘ಖಿಲಾಫತ್’ ಅಂದರೆ ಬಂಡಾಯ ಸಾರಿ ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ ಘೋಷಿಸಲು ಮತ್ತು ದೇಶದೊಳಗೆ ಗಂಭೀರ ಭಯೋತ್ಪಾದಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಉದ್ದೇಶ ಹೊಂದಿದ್ದ ಗುಂಪು ಎಂದು ದಿಲ್ಲಿ ಪೊಲೀಸರು ವರದಿ ತಿಳಿಸಿದ್ದಾರೆ.

Also Read  ಉಡುಪಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ➤ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ -DC ಜಿ.ಜಗದೀಶ್

 

 

error: Content is protected !!
Scroll to Top