ಬೈಕ್ ಮತ್ತು ಕಾರು ಡಿಕ್ಕಿ..!    ಯುವಕ ಮೃತ್ಯು..!               

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 23.  ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ಚೆರ್ಕಳ ಕೆ .ಕೆ ಪುರದಲ್ಲಿ ನಡೆದಿದೆ.

ಮೃತಪಟ್ಟವರನ್ನು ಕುಂಬಳೆ ಮೊಗ್ರಾಲ್ ಖುತುಬಿ ನಗರದ ಅಹಮ್ಮದ್ ಕಬೀರ್ ( 30) ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ವಿವಾಹ ಆಮಂತ್ರಣಕ್ಕೆ ತೆರಳಿ ಮರಳುತ್ತಿದ್ದಾಗ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಕಬೀರ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ನಟ ರಜಿನಿಕಾಂತ್‌ ಪುತ್ರಿ ಮನೆಯಲ್ಲಿ ಕಳ್ಳತನ ➤ ಚಾಲಕನ ಮೇಲೆ ಸಂಶಯ

 

 

error: Content is protected !!
Scroll to Top