ಅಗ್ನಿಪಥ್ ನೇಮಕಾತಿ – ತಾತ್ಕಾಲಿಕ ವಿಶ್ರಾಂತಿ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ಆಗಸ್ಟ್ 22 ರಿಂದ ಶಿವಮೊಗ್ಗ ನಗರದಲ್ಲಿ 2024ನೇ ಸಾಲಿನಲ್ಲಿ ಅಗ್ನಿಪತ್ ಯೋಜನೆ ಅಡಿ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಶಿವಮೊಗ್ಗ ಮತ್ತು ಇತರ ಜಿಲ್ಲೆಗಳಿಂದ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ವಿಶ್ರಾಂತಿಗಾಗಿ ಸರ್ಕಾರಿ ನೌಕರರ ನೂತನ ಸಮುದಾಯ ಭವನ, ಕೆ.ಇ.ಬಿ ವೃತ್ತ ಶಿವಮೊಗ್ಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!