ವಾಹನ ಅಪಘಾತ..!            ಪಾದಾಚಾರಿ ಮೃತ್ಯು..!      

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 22.  ಪರ್ಕಳ ಇಲ್ಲಿನ ರಾಷ್ಟ್ರೀಯ ಹೆದ್ದಾರಿ /(169 ಎ) ಪರ್ಕಳದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವಿನ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಪಾದಾಚಾರಿಯ ಮೇಲೆ ರಿಕ್ಷಾ ಎರೆಗಿದ್ದು ಪಾದಾಚಾರಿ ಅಶೋಕ್ ಶೆಟ್ಟಿಗಾರ್ ತೀವ್ರ ತಲೆಗೆ ಏಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂರು ದಿನಗಳ ಹಿಂದೆ ಅಶೋಕ್ ಶೆಟ್ಟಿಗಾರ್ ರವರು‌ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾವೊಂದು ಅವರ ಮೇಲೆ ಮಗುಚಿ ಬಿದ್ದಿತ್ತು, ಚಿಕಿತ್ಸೆ ಫಲಕಾರಿಯಾಗದೇ ಇದೀಗ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಎಂಐಟಿ ಉದ್ಯೋಗಿಯಾಗಿದ್ದು, ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧುಮಿತರನ್ನು ಅಗಲಿದ್ದಾರೆ.

Also Read  ➤ ದೆಹಲಿಯಲ್ಲಿ ವಾಸಿಸುವರಿಗೆ ಇನ್ನೂ ಮುಂದೆ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣ

 

error: Content is protected !!
Scroll to Top