ಕಡಬದಲ್ಲಿ ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆ ► ಫೆಬ್ರವರಿ 28 ರಂದು ಕಡಬ ಬಿಜೆಪಿಯಿಂದ ಕ್ಯಾಂಡಲ್ ಉರಿಸಿ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆಯ ವಿರುದ್ಧ ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಕಡಬ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಕಡಬ ಬಿಜೆಪಿ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ.

ವಿದ್ಯುತ್ ಕಡಿತ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಸೇರಿದಂತೆ ವಿದ್ಯುತ್ ಬಳಕೆದಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದರೆ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿರುವ ಬಿಜೆಪಿ ಪ್ರಮುಖರು ಫೆ. 28 ರಂದು ಸಂಜೆ ವಿದ್ಯುತ್ ಬಳಕೆದಾರರು ಹಾಗೂ ವಿವಿಧ ಸಂಘಟನೆಗಳ ನೆರವಿನೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಡಬದಿಂದ ಕ್ಯಾಂಡಲ್ ಬತ್ತಿ  ಉರಿಸಿಕೊಂಡು ಮೆಸ್ಕಾಂ ಕಚೇರಿಗೆ ತೆರಳಲಿರುವ ಪ್ರತಿಭಟನಾಕಾರರು ಅಲ್ಲಿ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ತ್ವರಿತ ಕ್ರಮಕ್ಕೆ ಸೂಚನೆ ➤ ಎಸ್. ಸಸಿಕಾಂತ್ ಸೆಂಥಿಲ್

error: Content is protected !!
Scroll to Top