ಮಂಗಳೂರು – ಕುಳೂರು ಸೇತುವೆ ದುರಸ್ತಿ ಕಾರ್ಯ ವಾಹನ ಸಂಚಾರ ಸ್ಥಗಿತ                        

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 22.  ಕುಳೂರು ಹಳೆ ಸೇತುವೆಯ ದುರಸ್ತಿ ಕಾಮಗಾರಿ ಆರಂಭವಾಗಿದ್ದು, ನಂತೂರು ಮತ್ತು ಸುರತ್ಕಲ್ ನಡುವೆ ದಿನವಿಡೀ ಸಂಚಾರ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸೇತುವೆಯ ಕೆಳಭಾಗಕ್ಕೆ ಡಾಂಬರು ಹಾಕಲು ಮತ್ತು ಪ್ಲಾಸ್ಟರಿಂಗ್ ಮಾಡಲು ಹಳೇ ಕುಳೂರು ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಗಲಿನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳು ಎರಡೂ ದಿಕ್ಕಿಗೆ ಒಂದೇ ಸೇತುವೆಯನ್ನು ಬಳಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

 

error: Content is protected !!
Scroll to Top