ಪಂಜ: ನಿವೃತ್ತ ಉಪವಲಯಾರಣ್ಯಾಧಿಕಾರಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಆ. 21. ಅರಣ್ಯ ಇಲಾಖೆಯ ನಿವೃತ್ತ ಉಪವಲಯಾರಣ್ಯಾಧಿಕಾರಿ ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ನಿವಾಸಿ ಪದ್ಮನಾಭ ಗೌಡರವರು ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

 

ಪದಮನಾಭ ಗೌಡರವರು ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ನೇಮಕಗೊಂಡು ನಂತರ ಉಪವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಪಡೆದಿದ್ದ ಇವರು, ಸುಳ್ಯ, ಪಂಜ, ಬಳ್ಪ, ಉಕ್ಕುಡ ಗೇಟ್, ಸುಬ್ರಹ್ಮಣ್ಯ ಗೇಟ್, ಕುಂದಾಪುರ ಹಾಗೂ ಪಣಂಬೂರಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

Also Read  ಸೆ.12 ಇಂದ್ರಧನುಷ್ ಕಾರ್ಯಕ್ರಮ

error: Content is protected !!
Scroll to Top