ಬೀಟಿಗೆ: ಟ್ರಾನ್ಸ್‌ಫಾರ್ಮರ್ ನಿಂದಾಗಿ ಗುಡ್ಡೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.23. ವಿದ್ಯುತ್ ಟ್ರಾನ್ಸ್‌ಫಾರ್ಮರ್ ನಿಂದ ಬೆಂಕಿಯ ಕಿಡಿಯೊಂದು ಗುಡ್ಡೆಗೆ ಬಿದ್ದ ಪರಿಣಾಮ ಸುಮಾರು 2 ಎಕರೆ ಗುಡ್ಡೆ ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಬೀಟಿಗೆ ಎಂಬಲ್ಲಿ ನಡೆದಿದೆ.

ಪೇರಮೊಗರು ಸಮೀಪದ ಬೀಟಿಗೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಶೇಖರ್ ಭಟ್ ಎಂಬವರ ಗುಡ್ಡೆಗೆ ಬಿದ್ದ ಬೆಂಕಿಯ ಕಿಡಿಯೊಂದು ಕ್ಷಣಮಾತ್ರದಲ್ಲಿ ಪರಿಸರವನ್ನು ಆವರಿಸಿತು‌. ವಿಷಯ ತಿಳಿದ ಸ್ಥಳೀಯ ಕೆಲವು ಯುವಕರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು‌. ಶುಕ್ರವಾರ ಮಸೀದಿಗೆಂದು ತೆರಳಿದ್ದ ಯುವಕರೂ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಬಳಿಕ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.

error: Content is protected !!
Scroll to Top