ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ಕಡಬದ ಬ್ಯೂಲಾ ಪಿ.ಟಿ ಅವರಿಗೆ ಬೆಳ್ಳಿ ಪದಕ

(ನ್ಯೂಸ್ ಕಡಬ) newskadaba.com ಕಡಬ, ಆ. 21. ಮೈಸೂರು ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 17 ಮತ್ತು 18ರಂದು ನಡೆದ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮರ್ದಾಳದ ಬ್ಯೂಲಾ ಪಿ ಟಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

 

64 ಕೆಜಿ ವಿಭಾಗದಲ್ಲಿ 67 ಕೆಜಿ ಸ್ನ್ಯಾಚ್ ಮತ್ತು 93 ಕೆಜಿ ಕ್ಲೀನ್ ಮತ್ತು ಜರ್ಕಗಳನ್ನು ಎತ್ತಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಈಕೆ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಎಂ.ಕಾಂ. ವಿದ್ಯಾರ್ಥಿನಿ ಹಾಗೂ ಮರ್ದಾಳದ ಪಾರಸೇರಿ ತೋಮಸ್ ಪಿ ವಿ ಹಾಗೂ ಗ್ರೇಸಿ ದಂಪತಿಗಳ ಪುತ್ರಿ.

error: Content is protected !!
Scroll to Top